ವಾಯುಗುಣ ಬದಲಾವಣೆ ಮೇಲಿನ ಅಂತರಸರ್ಕಾರಿ ನಿಯೋಗ ( - ) ಮಾನವನ ಪ್ರಭಾವದಿಂದ ವಾಯುಗುಣದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತುಲನ ಮಾಡಲು ಸ್ಥಾಪಿಸಲಾದ ಒಂದು ನಿಯೋಗ. ಇದನ್ನು ೧೯೮೮ರಲ್ಲಿ ಅಂತರರಾಷ್ಟ್ರೀಯ ವಾತಾವರಣಶಾಸ್ತ್ರ ಸಂಸ್ಥೆ ( - ) ಮತ್ತು ಸಂಯುಕ್ತ ರಾಷ್ಟ್ರ ಪರಿಸರ ಕಾರ್ಯಕ್ರಮ ( - ) ಒಟ್ಟುಗೂಡಿ ಸ್ಥಾಪಿಸಿದವು. ೨೦೦೨ರಿಂದ ಭಾರತದ ಡಾ. ರಾಜೇಂದ್ರಕುಮಾರ್ ಪಚೌರಿಯವರ ನೇತೃತ್ವದಲ್ಲಿ ನಡಿಯುತ್ತಿರುವ ಈ ನಿಯೋಗವು ೨೦೦೭ರ ನೋಬೆಲ್ ಶಾಂತಿ ಪುರಸ್ಕಾರವನ್ನು ಅಮೇರಿಕ ದೇಶದ ಮಾಜಿ ಉಪರಾಷ್ಟ್ರಪತಿ ಆಲ್ ಗೋರ್ ಒಂದಿಗೆ ಹಂಚಿಕೊಂಡಿತು. « '350' CO2 », , 25. 2009